ಇನ್ನು ವಾಯುಧಾರಣೆ ಎಂತೆಂದಡೆ:
ಚತುರ್ದಶವಾಯುಗಳೊಳು ಪಂಚವಾಯುವೆ ಮುಖ್ಯವಾಗಿಹುದು.
ಆ ಪಂಚವಾಯುವಿನೊಳು ದ್ವಿವಾಯುವೆ ಮುಖ್ಯವಾಗಿಹುದು.
ಆ ದ್ವಿವಾಯುವಿನೊಳು ಏಕವಾಯುವೆ ಮುಖ್ಯವಾಗಿಹುದು.
ಆ ಏಕವಾಯುವೆ ಚತುರ್ದಶವಾಯುವಾಗಿ ಚರಿಸುತ್ತಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Innu vāyudhāraṇe entendaḍe:
Caturdaśavāyugaḷoḷu pan̄cavāyuve mukhyavāgihudu.
Ā pan̄cavāyuvinoḷu dvivāyuve mukhyavāgihudu.
Ā dvivāyuvinoḷu ēkavāyuve mukhyavāgihudu.
Ā ēkavāyuve caturdaśavāyuvāgi carisuttihudu nōḍā
apramāṇakūḍalasaṅgamadēvā.