•  
  •  
  •  
  •  
Index   ವಚನ - 362    Search  
 
ಇನ್ನು ಜಂಗಮಭಕ್ತಿಯ ವಿವರ ಅದೆಂತೆಂದಡೆ: ಶುದ್ಧವಹ ಪಾಕಪ್ರಯತ್ನಂಗಳಿಂದ, ಪ್ರಿಯವಾಕ್ಯಂಗಳಿಂದ, ಬಾಹ್ಯಪರಿಚಾರಂಗಳಿಂದ, ಸಹಜಹಸ್ತದಿಂದ, ಕುಲ ಛಲ ಧನ ಯವ್ವನ ರೂಪು ವಿದ್ಯೆ ರಾಜ್ಯ ತಪವೆಂಬ ಅಷ್ಟಮದಂಗಳ ಬಿಟ್ಟು, ಅಹಂಕಾರವಂ ಬಿಟ್ಟು ನಿರಹಂಕಾರಭರಿತನಾಗಿ, ಉಪಾಧಿಯ ಬಿಟ್ಟು ನಿರುಪಾಧಿಕನಾಗಿ, ದೇಹಾದಿಗುಣಂಗಳ ಬಿಟ್ಟು ನಿರ್ದೇಹಿಕನಾಗಿ, ಅಪೇಕ್ಷೆಯಂ ಬಿಟ್ಟು ನಿರಾಪೇಕ್ಷಿತನಾಗಿ, ಜಂಗಮವೇ ಲಿಂಗವೆಂದು ಮನಶುಚಿಯಿಂದ ಮಾಡುವುದೀಗ ಜಂಗಮಭಕ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Innu jaṅgamabhaktiya vivara adentendaḍe: Śud'dhavaha pākaprayatnaṅgaḷinda, priyavākyaṅgaḷinda, bāhyaparicāraṅgaḷinda, sahajahastadinda, kula chala dhana yavvana rūpu vidye rājya tapavemba aṣṭamadaṅgaḷa biṭṭu, ahaṅkāravaṁ biṭṭu nirahaṅkārabharitanāgi, upādhiya biṭṭu nirupādhikanāgi, dēhādiguṇaṅgaḷa biṭṭu nirdēhikanāgi, apēkṣeyaṁ biṭṭu nirāpēkṣitanāgi, jaṅgamavē liṅgavendu manaśuciyinda māḍuvudīga jaṅgamabhakti nōḍā apramāṇakūḍalasaṅgamadēvā.