•  
  •  
  •  
  •  
Index   ವಚನ - 602    Search  
 
ಪಿಂಗಳನಾಳದಲ್ಲಿ ಆಡುವ ಸೂರ್ಯನ ದೇವರೆಂಬರು; ಆ ಸೂರ್ಯ ದೇವರಲ್ಲ ನೋಡಾ. ಇಡಾನಾಳದಲ್ಲಿ ಆಡುವ ಚಂದ್ರನ ದೇವರೆಂಬರು; ಆ ಚಂದ್ರನು ದೇವರಲ್ಲ ನೋಡಾ. ಸುಷುಮ್ನನಾಳದಲ್ಲಿ ಆಡುವ ಜೀವಾತ್ಮನ ದೇವರೆಂಬರು; ಆ ಜೀವಾತ್ಮನು ದೇವರಲ್ಲ ನೋಡಾ. ಆ ಇಡಾ ಪಿಂಗಳ ಸುಷುಮ್ನ ನಾಳದೊಳಾಡುವ ಚಂದ್ರ ಸೂರ್ಯ ಜೀವಾತ್ಮರಿಗೆ ಪರಬ್ರಹ್ಮವೇ ಜನಕನೆಂದರಿದು ಆ ಪರಬ್ರಹ್ಮವೇ ತಾನೆಂದರಿದಡೆ ತಾನೆ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವ.
Transliteration Piṅgaḷanāḷadalli āḍuva sūryana dēvarembaru; ā sūrya dēvaralla nōḍā. Iḍānāḷadalli āḍuva candrana dēvarembaru; ā candranu dēvaralla nōḍā. Suṣumnanāḷadalli āḍuva jīvātmana dēvarembaru; ā jīvātmanu dēvaralla nōḍā. Ā iḍā piṅgaḷa suṣumna nāḷadoḷāḍuva candra sūrya jīvātmarige parabrahmavē janakanendaridu ā parabrahmavē tānendaridaḍe tāne dēva nōḍā, apramāṇakūḍalasaṅgamadēva.