ನಿರಂಜನಾತೀತ ಮಹೇಶ್ವರಂಗೆ ನಿರಂಜನಾತೀತವೇ ಅಂಗ,
ನಿರಂಜನಾತೀತವೆ ಹಸ್ತ, ನಿರಂಜನಾತೀತವೆ ಗುರುಲಿಂಗ.
ನಿರಂಜನಾತೀತವೆಂಬ ಮುಖದಲ್ಲಿ,
ನಿರಂಜನಾತೀತಾನಂದವೆಂಬ ಸುಖವ ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Niran̄janātīta mahēśvaraṅge niran̄janātītavē aṅga,
niran̄janātītave hasta, niran̄janātītave guruliṅga.
Niran̄janātītavemba mukhadalli,
niran̄janātītānandavemba sukhava samarpaṇavaṁ māḍi
tr̥ptiyane bhōgisuvanu nōḍā
apramāṇakūḍalasaṅgamadēvā