ಆ ಪರಮಭೋಗಿಯಲ್ಲಿಯೆ ಸಂತೋಷವಳಿದು
ನಿಷ್ಪತ್ತಿಯಾಗಿ ನಿಂದುದೆ ನಿರ್ಮಲಸುಷುಪ್ತಿ.
ಮುಂದೆ ಹೇಳಿದ ಪರಮಭೋಗವನು ಬಿಟ್ಟು
ಮೇಲಾದ ಪರಮಾನಂದಕ್ಕೆ ಮೊದಲು ನಿರ್ಮಲತೂರ್ಯ,
ಮುಂದೆ ಹೇಳಿದ ಪರಮಾನಂದವ ಸುಟ್ಟ ಠಾವು ನಿರ್ಮಲ ತೂರ್ಯಾತೀತ
ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Ā paramabhōgiyalliye santōṣavaḷidu
niṣpattiyāgi nindude nirmalasuṣupti.
Munde hēḷida paramabhōgavanu biṭṭu
mēlāda paramānandakke modalu nirmalatūrya,
munde hēḷida paramānandava suṭṭa ṭhāvu nirmala tūryātīta
nōḍā
apramāṇakūḍalasaṅgamadēvā.