ಅವಸ್ಥೆಗಳಿಪ್ಪತ್ತುನಾಲ್ಕನು
ಹೀಂಗೆ ದರ್ಶನವ ಮಾಡಿದಾತನು ಶಿವಮುಕ್ತನು,
ಆತನು ಶಿವಯೋಗಿ ಲಿಂಗಾನುಭಾವಿ.
ಆ ಶಿವಮುಕ್ತನಿಗೆ ಪಂಚಮಲಂಗಳು ಪಂಚಶಕ್ತಿಗಳು
ಬಿಟ್ಟ ಪ್ರಕಾರ ದರ್ಶನವದೆಂತೆಂದಡೆ:
ಮುಂದೆ ಇದ್ದ ಮಾಯಾಭೋಗದ ಇಚ್ಛೆಯಿಲ್ಲದಿಹುದೆ
ತಿರೋಧಾನಮಲ ನಷ್ಟ,
ಕರ್ಮವ ತೊರೆದು ಸುಖದುಃಖಗಳು ಸಮವಾಗಿ
ಪಂಚಕೃತ್ಯಂಗಳು ಕೆಟ್ಟುದಾಗಿ,
ಮಹಾಮಾಯೆ ನಷ್ಟ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Avasthegaḷippattunālkanu
hīṅge darśanava māḍidātanu śivamuktanu,
ātanu śivayōgi liṅgānubhāvi.
Ā śivamuktanige pan̄camalaṅgaḷu pan̄caśaktigaḷu
biṭṭa prakāra darśanavadentendaḍe:
Munde idda māyābhōgada iccheyilladihude
tirōdhānamala naṣṭa,
karmava toredu sukhaduḥkhagaḷu samavāgi
pan̄cakr̥tyaṅgaḷu keṭṭudāgi,
mahāmāye naṣṭa nōḍā
apramāṇakūḍalasaṅgamadēvā.