ಊನವಾಗಿಹ ದೇಹವ ಕೂಡಿಕೊಂಡು ಹೋಗಿ
ತಾನದಾಗಿ, ಜೀವನು ತಾನೆಯಾಗಿ,
ಸಾಯದೆ ಸತ್ತು ಮೋನವಾಗಿಹ
ತೂರ್ಯಾತೀತವ ಮುಳುಗಿಕೊಂಡಿಹ
ಜ್ಞಾನನಾಯಕನೆ ಈಶನೆಂದು ಶ್ರುತಿಗಳು ಸಾರುತ್ತಿವೆ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Ūnavāgiha dēhava kūḍikoṇḍu hōgi
tānadāgi, jīvanu tāneyāgi,
sāyade sattu mōnavāgiha
tūryātītava muḷugikoṇḍ'̔iha
jñānanāyakane īśanendu śrutigaḷu sāruttive nōḍā
apramāṇakūḍalasaṅgamadēvā.