•  
  •  
  •  
  •  
Index   ವಚನ - 801    Search  
 
ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತ ಈ ಐದು ಅವಸ್ಥೆಗಳಾಗಿ ಕೆಡುಹುದು ಪರವಲ್ಲ. ಶಿವನಿಗೆ ಅವಸ್ಥೆಗಳೊಂದು ಕಾಲವು ಇಲ್ಲವೆಂದು ಸಕಲಾಗಮಶಾಸ್ತ್ರಂಗಳಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Jāgra svapna suṣupti tūrya tūryātīta ī aidu avasthegaḷāgi keḍ'̔uhudu paravalla. Śivanige avasthegaḷondu kālavu illavendu sakalāgamaśāstraṅgaḷalli prasid'dhavāgi hēḷuttihudu nōḍā apramāṇakūḍalasaṅgamadēvā.