ತನುವಿನಲ್ಲಿ ಹೊರೆಯಿಲ್ಲ, ಮನದಲ್ಲಿ ವ್ಯಾಕುಳವಿಲ್ಲ.
ಭಾವದಲ್ಲಿ ಬಯಕೆಯಿಲ್ಲ, ಅರಿವಿನಲ್ಲಿ ವಿಚಾರವಿಲ್ಲ.
ನಿಜದಲ್ಲಿ ಅವಧಾನವಿಲ್ಲ. ನಿರ್ಲೇಪಸಂಗದಲ್ಲಿ ಬಿಚ್ಚಿ ಬೇರಾಗಲಿಲ್ಲ.
ಕಲಿದೇವರದೇವಾ, ನಿಮ್ಮಲ್ಲಿ ಬೆರೆಸಿ ಬೇರಿಲ್ಲದಿರ್ದೆನು.
Transliteration Tanuvinalli horeyilla, manadalli vyākuḷavilla.
Bhāvadalli bayakeyilla, arivinalli vicāravilla.
Nijadalli avadhānavilla. Nirlēpasaṅgadalli bicci bērāgalilla.
Kalidēvaradēvā, nim'malli beresi bērilladirdenu.