ಆಡುವ ಮಾತಿಂಗೆ, ಮಾಡುವ ಕೀಲಿಂಗೆ,
ಕಡೆ ನಡು ಮೊದಲಿಲ್ಲ.
ಅರಿದಡೆ ಒಂದೆ ವರ್ಮ ಭೇದ.
ಮಾಡುವ ಸೂತ್ರ ಕೀಲೊಂದರಲ್ಲಿ ಅಡಗಿದಡೆ,
ಅದು ಭೇದಕತನ.
ಅರಿದು ಕುರುಹಿನಲ್ಲಿ ಮರವೆ ನಿಃಪತಿಯಾದಡೆ,
ಅರ್ಕೇಶ್ವರಲಿಂಗ ಭಿನ್ನಭಾವಿಯಲ್ಲ.
Transliteration Āḍuva mātiṅge, māḍuva kīliṅge,
kaḍe naḍu modalilla.
Aridaḍe onde varma bhēda.
Māḍuva sūtra kīlondaralli aḍagidaḍe,
adu bhēdakatana.
Aridu kuruhinalli marave niḥpatiyādaḍe,
arkēśvaraliṅga bhinnabhāviyalla.