ಓಗರ ಹಸಿದು ಆಪ್ಯಾಯನವನುಂಡುದನಾರೂ ಅರಿಯರು.
ನೀರು ಬಾಯಾರಿ ಭೂಮಿಯ ಕುಡಿದುದನಾರೂ ಅರಿಯರು.
ದೇವರು ರೂಪಾಗಿ ಸಕಲರೊಳಗೆ ಗತಿಗೆಡುವುದನಾರೂ ಅರಿಯರು.
ವಿಪರೀತ ಕುರುಹಾಯಿತ್ತು,
ಅರ್ಕೇಶ್ವರಲಿಂಗನ ಗೊತ್ತಿಗೆ ಬಂದ ಕಾರಣ.
Transliteration Ōgara hasidu āpyāyanavanuṇḍudanārū ariyaru.
Nīru bāyāri bhūmiya kuḍidudanārū ariyaru.
Dēvaru rūpāgi sakalaroḷage gatigeḍuvudanārū ariyaru.
Viparīta kuruhāyittu,
arkēśvaraliṅgana gottige banda kāraṇa.