ಒಸರಿ ತುಂಬಿ ಮೇಲಕ್ಕೊಸರದಂತೆ,
ಆ ಘಟದ ಮುಖದಲ್ಲಿಯೆ ಅಡಗಿ ತೆಗೆದಡೆ,
ಕಟ್ಟಣಕೆ ಕಟ್ಟಿದಲ್ಲಿಪ್ಪಂತೆ
ನಾನಾ ಸತ್ಕ್ರೀಮಾರ್ಗದಲ್ಲಿದ್ದು,
ನಿಜನಿಶ್ಚಯವ ನೆಮ್ಮಬೇಕು, ಅರ್ಕೇಶ್ವರಲಿಂಗದಲ್ಲಿ.
Transliteration Osari tumbi mēlakkosaradante,
ā ghaṭada mukhadalliye aḍagi tegedaḍe,
kaṭṭaṇake kaṭṭidallippante
nānā satkrīmārgadalliddu,
nijaniścayava nem'mabēku, arkēśvaraliṅgadalli.