ಮಧುರವಾಣಿಯ ಉದರದಲ್ಲಿ,
ಒಂದು ನಿಜಕುಕ್ಕುಟ ಕೂಗುತ್ತದೆ.
ಮೂವರ ಮೊಲೆಯನುಂಡು,
ಮರೆದೊರಗಬೇಡಾ ಎಂದು ಬೆಳಗಾಯಿತ್ತು.
ಅರ್ಕೇಶ್ವರಲಿಂಗವ ನೋಡುವ ಬನ್ನಿ ಎಂದು ಕೂಗುತ್ತಿದ್ದಿತ್ತು.
Transliteration Madhuravāṇiya udaradalli,
ondu nijakukkuṭa kūguttade.
Mūvara moleyanuṇḍu,
maredoragabēḍā endu beḷagāyittu.
Arkēśvaraliṅgava nōḍuva banni endu kūguttiddittu.