•  
  •  
  •  
  •  
Index   ವಚನ - 26    Search  
 
ಇಂದ್ರಿಯಂಗಳಲ್ಲಿ ಲಿಂಗವು ಅರ್ಪಿತವ ಸಂಧಿಸಿಕೊಂಡು ಉಂ[ಬು]ದೆಂಬ ತ್ರಿಭಂಗಿ ಗ್ರಹಿತವ ನೋಡಾ. ಇಂದ್ರಿಯಂಗಳ ಮುಖದಲ್ಲಿ ಲಿಂಗವು ಬಂದು ಉಂಬಾಗ ಇಂದ್ರಿಯವೆ ಲಿಂಗಕ್ಕೆ ಬೀಜವೆ? ಅದು ಗರಿಗೋಲಿನ ಮೊನೆಯಂತೆ, ಲಿಂಗದಿಂದ ಸರ್ವೇಂದ್ರಿಯ ನಿಶ್ಚಯ. ಇದು ಲಿಂಗವ್ಯವಧಾನಿಯ ಅಂಗ, ಸದ್ಯೋಜಾತಲಿಂಗದ ಸಂಗ.
Transliteration Indriyaṅgaḷalli liṅgavu arpitava sandhisikoṇḍu uṁ[bu]demba tribhaṅgi grahitava nōḍā. Indriyaṅgaḷa mukhadalli liṅgavu bandu umbāga indriyave liṅgakke bījave? Adu garigōlina moneyante, liṅgadinda sarvēndriya niścaya. Idu liṅgavyavadhāniya aṅga, sadyōjātaliṅgada saṅga.