•  
  •  
  •  
  •  
Index   ವಚನ - 38    Search  
 
ಗಂಡಭೇರುಂಡನ ಪಕ್ಷಿಯಂತೆ ಆವ ಬಾಯಲ್ಲಿ ಆಹಾರವ ಕೊಂಡಡೂ ಘಟವೊಂದರಲ್ಲಿ ಆತ್ಮಸುಖವನೆಯ್ದುವಂತೆ, ಪಿಂಡದಿಂದ ಜ್ಞಾನವನರಿದಡೂ, ಜ್ಞಾನದಿಂದ ಪಿಂಡ ಇಪ್ಪುದಾದ ಕಾರಣ ಜ್ಞಾನದಿಂದ ಪಿಂಡವನರಿದಡೂ, ಉಭಯಮುಖ ಗೊತ್ತು ಒಂದಾಗಿ ವಿಷ್ಟಿಸುವ ಪೃಷ್ಠದಂತೆ ಅರಿವುದು ನಾನಾಮುಖ ಬಿಡುವುದು ಒಂದೆ ತೆರನಾದ ಕಾರಣ, ಚಿತ್ರವಿಚಿತ್ರಂಗಳನರಿವ ನಯನ ಮುಚ್ಚಿದಲ್ಲಿ ಒಂದೆ ದೃಷ್ಟ ಸದ್ಯೋಜಾತಲಿಂಗವನರಿವುದಕ್ಕೆ.
Transliteration Gaṇḍabhēruṇḍana pakṣiyante āva bāyalli āhārava koṇḍaḍū ghaṭavondaralli ātmasukhavaneyduvante, piṇḍadinda jñānavanaridaḍū, jñānadinda piṇḍa ippudāda kāraṇa jñānadinda piṇḍavanaridaḍū, ubhayamukha gottu ondāgi viṣṭisuva pr̥ṣṭhadante arivudu nānāmukha biḍuvudu onde teranāda kāraṇa, citravicitraṅgaḷanariva nayana muccidalli onde dr̥ṣṭa sadyōjātaliṅgavanarivudakke.