ಬೆಂಕಿಯ ಬೈಕೆಗೆ ಕಲ್ಲ ಮುಚ್ಚಿದಡೆ ನಲವಿಂದ ಇರಬಲ್ಲುದೆ,ಕಾಷ್ಠಕಲ್ಲದೆ?
ಬಲು ಶಾಸ್ತ್ರವ ಕಲಿತು ವಾಗ್ವಾದದ ಬಲುಮೆಯಿಂದ ನುಡಿದಡೆ
ಸಲೆ ನೆಲೆಯಲ್ಲಿದ್ದವ ಅವರಿಗೊಲವರವಪ್ಪನೆ, ತನ್ನ ನಿಳಯರಿಗಲ್ಲದೆ?
ಇಂತೀ ಜಡ ಅಜಡವೆಂಬ ಉಭಯವನರಿದು ಹರಿದು ಕೂಡಬೇಕು,
ಸದ್ಯೋಜಾತಲಿಂಗವ.
Transliteration Beṅkiya baikege kalla muccidaḍe nalavinda iraballude,kāṣṭhakallade?
Balu śāstrava kalitu vāgvādada balumeyinda nuḍidaḍe
sale neleyalliddava avarigolavaravappane, tanna niḷayarigallade?
Intī jaḍa ajaḍavemba ubhayavanaridu haridu kūḍabēku,
sadyōjātaliṅgava.