•  
  •  
  •  
  •  
Index   ವಚನ - 80    Search  
 
ಆತ್ಮ ತೇಜಕ್ಕೆ ಬೀಗಿ ಬೆರೆದು, ಶಾಸ್ತ್ರದ ಸಂತೋಷಕ್ಕೆ ಸಾಧ್ಯವಾದಿಹಿತೆಂದು, ವಚನದ ರಚನೆಗೆ ರಚಿಸಿದೆನೆಂದು, ತರ್ಕಕ್ಕೆ ಹೊತ್ತು ಹೋರುವನ್ನಕ್ಕರ ಗುರುವೆಂತಾದಿರೊ ? ಘಟದ ಮಧ್ಯದಲ್ಲಿ ಪೂಜಿಸಿಕೊಂಬವನಾರೆಂದು ಅರಿಯದೆ, ಫಲವ ಹೊತ್ತಿರ್ಪ ಮರನಂತೆ, ಕ್ಷೀರವ ಹೊತ್ತಿರ್ಪ ಕೆಚ್ಚಲಂತೆ, ನಿನ್ನ ನೀನೆ ತಿಳಿದು ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Ātma tējakke bīgi beredu, śāstrada santōṣakke sādhyavādihitendu, vacanada racanege racisidenendu, tarkakke hottu hōruvannakkara guruventādiro? Ghaṭada madhyadalli pūjisikombavanārendu ariyade, phalava hottirpa maranante, kṣīrava hottirpa keccalante, ninna nīne tiḷidu nōḍā, niḥkaḷaṅka mallikārjunā. Read More