•  
  •  
  •  
  •  
Index   ವಚನ - 206    Search  
 
ಕಣ್ಣ ಮುಚ್ಚಿ ದೃಷ್ಟಿಯಲ್ಲಿ ನೋಡಬಲ್ಲಡೆ ಆತನ ಬಲ್ಲವನೆಂಬೆ. ಬಾಯ ಮುಚ್ಚಿ ನಾಲಗೆಯಲ್ಲಿ ಉಂಡಡೆ, ಆತ ಸಂಗಗೊಳಿಸಿದವನೆಂಬೆ. ತನುವ ಮರೆದು, ಆ ತನುವ ಕಂಡಡೆ, ಆತನ ಅರಿದವನೆಂಬೆನಯ್ಯಾ. ಬೆಳಗಿನೊಳಗಣ ಬೆಳಗು ಕಳೆಯೊಳಗಣ ಕಾಂತಿ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Kaṇṇa mucci dr̥ṣṭiyalli nōḍaballaḍe ātana ballavanembe. Bāya mucci nālageyalli uṇḍaḍe, āta saṅgagoḷisidavanembe. Tanuva maredu, ā tanuva kaṇḍaḍe, ātana aridavanembenayyā. Beḷaginoḷagaṇa beḷagu kaḷeyoḷagaṇa kānti, niḥkaḷaṅka mallikārjunā. Read More