ನಾನಾ ಸಾರಂಗಳ ಸವಿಯ,
ಆ ಸಾರ ಅರಿಯಬಲ್ಲುದೇ,
ಸವಿಸಾರವ ಬಲ್ಲವನಲ್ಲದೆ ?
ನಾನಾ ಘಟಪಟವ ಆ ಘಟಪಟಂಗಳು ಬಲ್ಲವೆ,
ಇದಿರಿಟ್ಟವಲ್ಲದೆ ?
ತಾ ನೋಡುವಲ್ಲಿ ನಾನಾ ಛಾಯಂಗಳು
ದರ್ಪಣದಲ್ಲಿ ಒಪ್ಪುವಂತೆ,
ಆ ದರ್ಪಣಕ್ಕೆ ತನ್ನ ಮುಖಕ್ಕೆ ದೃಷ್ಟವುಂಟೆ ?
ಆ ನೆನಹಿಂಗೆ ಇಷ್ಟ, ಆ ಇಷ್ಟಕ್ಕೆ ಈ ಗುಣದೃಷ್ಟ.
ಇಂತೀ ಪ್ರಾಣಲಿಂಗಿಯ ಕೂಟ, ಮೇಲೆ ಐಕ್ಯಾನುಭಾವಿಯ ಲೇಪ,
ನಿಃಕಳಂಕ ಮಲ್ಲಿಕಾರ್ಜುನಲಿಂಗದೊಳಗಿನಾಟ.
Transliteration Nānā sāraṅgaḷa saviya,
ā sāra ariyaballudē,
savisārava ballavanallade?
Nānā ghaṭapaṭava ā ghaṭapaṭaṅgaḷu ballave,
idiriṭṭavallade?
Tā nōḍuvalli nānā chāyaṅgaḷu
darpaṇadalli oppuvante,
ā darpaṇakke tanna mukhakke dr̥ṣṭavuṇṭe?
Ā nenahiṅge iṣṭa, ā iṣṭakke ī guṇadr̥ṣṭa.
Intī prāṇaliṅgiya kūṭa, mēle aikyānubhāviya lēpa,
niḥkaḷaṅka mallikārjunaliṅgadoḷagināṭa.