ನಿನ್ನಿಂದ ನಾ ಭವಸಾಗರವ ಗೆದ್ದೆಹೆನೆಂದಡೆ,
ಭಕ್ತರಿಗೆ ನೀನೇರುವ ಹರುಗೋಲವೆ ?
ನಿನ್ನ ಮರೆಯಲ್ಲಿ ಇದ್ದೆಹೆನೆಂದಡೆ, ಕರದಲ್ಲಿ ಕಡ್ಡಾಯವೆ ?
ಚಿನ್ಮಯ ನೀನಾಗಿ, ತನ್ಮಯ ನಾನಾಗಿ ಭಿನ್ನಭಾವಿಯಾದಲ್ಲಿ,
ನೀನಾರು, ನಾನಾರು ನಿಃಕಳಂಕ ಮಲ್ಲಿಕಾರ್ಜುನಾ ?
Transliteration (Vachana in Roman Script) Ninninda nā bhavasāgarava geddehenendaḍe,
bhaktarige nīnēruva harugōlave?
Ninna mareyalli iddehenendaḍe, karadalli kaḍḍāyave?
Cinmaya nīnāgi, tanmaya nānāgi bhinnabhāviyādalli,
nīnāru, nānāru niḥkaḷaṅka mallikārjunā?
Read More