•  
  •  
  •  
  •  
Index   ವಚನ - 466    Search  
 
ನೆಟ್ಟ ಲಿಂಗವ ಪ್ರತಿಷ್ಠೆಯೆಂಬರು. ಹುಟ್ಟಿದ ಲಿಂಗವ ಸ್ವಯಂಭುವೆಂಬರು. ಈ ಉಭಯದಲ್ಲಿ, ಸ್ವಯಂಭು ಪ್ರತಿಷ್ಠೆಯನರಿವುತ್ತಿರ್ದವರ ಕಂಡು, ಮರ್ತ್ಯದ ಮಹಾಜನಂಗಳು ಹೊತ್ತುಹೋರಲೇಕೆ ? ಎನಗೆ ಇಷ್ಟವ ಕೊಟ್ಟ ಗುರು, ಬಟ್ಟೆಯ ಹೇಳಿದುದಿಲ್ಲ. ಪೃಥ್ವಿಯೊಳಗಣ ಮತ್ತರದ ಅಚ್ಚಿಗವ ಬಿಡಿಸಾ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Neṭṭa liṅgava pratiṣṭheyembaru. Huṭṭida liṅgava svayambhuvembaru. Ī ubhayadalli, svayambhu pratiṣṭheyanarivuttirdavara kaṇḍu, martyada mahājanaṅgaḷu hottuhōralēke? Enage iṣṭava koṭṭa guru, baṭṭeya hēḷidudilla. Pr̥thviyoḷagaṇa mattarada accigava biḍisā, niḥkaḷaṅka mallikārjunā.