ಭಕ್ತಂಗೆ ಹೆಣ್ಣುಬೇಡ, ಹೊನ್ನುಬೇಡ, ಮಣ್ಣುಬೇಡವೆಂದು ಹೇಳಿ,
ತಾ ಮುಟ್ಟುವನ್ನಬರ ಆ ಬೋಧೆಯ ಹುಸಿಯೆಂದ.
ತಾ ಮುಟ್ಟದೆ ತನ್ನ ಮುಟ್ಟಿಪ್ಪ ಭಕ್ತನ ತಟ್ಟದೆ,
ಕರ್ಮಕ್ಕೆ ಕರ್ಮವನಿತ್ತು ತಾ ವರ್ಮಿಗನಾಗಬಲ್ಲಡೆ,
ಹೊಳೆಯಲ್ಲಿ ಹಾಕಿದ ಸೋರೆಯಂತೆ, ಅನಿಲ ಕೊಂಡೊಯ್ದ ಎಲೆಯಂತೆ,
ಯಾತಕ್ಕೂ ಹೊರಗಾಗಿ ಜಗದಾಸೆಯಿಲ್ಲದಿಪ್ಪ ವೇಷಕ್ಕೆ ಒಳಗಲ್ಲ.
ಆತ ಜಗದೀಶನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Bhaktaṅge heṇṇubēḍa, honnubēḍa, maṇṇubēḍavendu hēḷi,
tā muṭṭuvannabara ā bōdheya husiyenda.
Tā muṭṭade tanna muṭṭippa bhaktana taṭṭade,
karmakke karmavanittu tā varmiganāgaballaḍe,
hoḷeyalli hākida sōreyante, anila koṇḍoyda eleyante,
yātakkū horagāgi jagadāseyilladippa vēṣakke oḷagalla.
Āta jagadīśanembe, niḥkaḷaṅka mallikārjunā.