ಭಕ್ತರೆಂಬವರೆಲ್ಲರೂ ಲೆಕ್ಕಕ್ಕೆ ಹಾಯ್ದು,
ದೃಷ್ಟವಪ್ಪ ಜಂಗಮದ ಕೈಯಲೂ ಕಷ್ಟತನವಹ ಊಳಿಗವ ಕೊಂಡು,
ಮತ್ತೆ ಜಂಗಮವೆಂದು ಪ್ರಸಾದವನಿಕ್ಕಿಸಿಕೊಂಡುಂಬ
ಸಿಕ್ಕಿಸುಗಾರರ ನೋಡಾ.
ಇಂತೀ ಹೊಟ್ಟೆಯ ಹೊರೆವ ಜಂಗಮಕ್ಕೆಯೂ
ಠಕ್ಕಿಂದ ಮಾಡುವ ಭಕ್ತಂಗೆಯೂ
ಹುಚ್ಚುಗೊಂಡ ನಾಯಿ ಒಡೆಯನ ತಿಂದು,
ಅದರಲ್ಲಿ ಮಿಕ್ಕುದ ನರಿ ತಿಂದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Bhaktarembavarellarū lekkakke hāydu,
dr̥ṣṭavappa jaṅgamada kaiyalū kaṣṭatanavaha ūḷigava koṇḍu,
matte jaṅgamavendu prasādavanikkisikoṇḍumba
sikkisugārara nōḍā.
Intī hoṭṭeya horeva jaṅgamakkeyū
ṭhakkinda māḍuva bhaktaṅgeyū
huccugoṇḍa nāyi oḍeyana tindu,
adaralli mikkuda nari tindante, niḥkaḷaṅka mallikārjunā.
Read More