ಮಣ್ಣು ಕೊಂಡ ನೀರಿನಂತೆ, ಬಣ್ಣವನೊಳಕೊಂಡ ಕಪ್ಪಡದಂತೆ,
ಬಣ್ಣವನೊಳಕೊಂಡ ಬಂಗಾರದಂತೆ,
ಈ ತ್ರಿವಿಧವನೊಳಕೊಂಡ ಭೇದಭಾವದಂತೆ,
ಬಂದ ಘಟ, ಸಂಧಿಸಿದ ಇಷ್ಟ, ಉಭಯದ ಸಂದನರಿವ ಭಾವ.
ಈ ತ್ರಿವಿಧವನೊಂದುಗೂಡಿ ಸಕಲಸುಖಿಯಾದ ನಿರಂಗನೆ ಪ್ರಾಣಲಿಂಗಿ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script)Maṇṇu koṇḍa nīrinante, baṇṇavanoḷakoṇḍa kappaḍadante,
baṇṇavanoḷakoṇḍa baṅgāradante,
ī trividhavanoḷakoṇḍa bhēdabhāvadante,
banda ghaṭa, sandhisida iṣṭa, ubhayada sandanariva bhāva.
Ī trividhavanondugūḍi sakalasukhiyāda niraṅgane prāṇaliṅgi,
niḥkaḷaṅka mallikārjunā. Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.