ಮನೆಯ ಕೋಡಗ ಊರ ಮಂತವ ನುಂಗಿತ್ತು.
ಮಂತದೊಳಗಣ ಮಂದಿ ಹೊಂದಿದುದಿಲ್ಲ.
ಅದರಂದದ ಇರವ ಇನ್ನಾರಿಗೆ ಉಸುರುವೆ ?
ಎಂಟುಕಾಲ ಮಂಟೆಯವ ಟೆಂಟಣಿಸಿ ನಿಂದವೈದು ಕಂಬ.
ಕಂಬದ ಮೇಲಣ ಬೋದಿಗೆ ಮೂರು ಸಂದ ಬಿಟ್ಟುದಿಲ್ಲ.
ಹಿಂಗಿದ ಮಣಿಮಾಡದ ಮಂತವ, ನುಂಗಿದ ಕೋಡಗವ,
ಕಂಗಳು ನುಂಗಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Maneya kōḍaga ūra mantava nuṅgittu.
Mantadoḷagaṇa mandi hondidudilla.
Adarandada irava innārige usuruve?
Eṇṭukāla maṇṭeyava ṭeṇṭaṇisi nindavaidu kamba.
Kambada mēlaṇa bōdige mūru sanda biṭṭudilla.
Hiṅgida maṇimāḍada mantava, nuṅgida kōḍagava,
kaṅgaḷu nuṅgittu, niḥkaḷaṅka mallikārjunā.
Read More