ವಸ್ತುವ ಕುರಿತು ಇಷ್ಟವ ನೋಡಬೇಕಲ್ಲದೆ,
ಇಷ್ಟವ ಕುರಿತು ವಸ್ತುವ ನೋಡಬಹುದೆ ?
ಹಿಡಿತೆಯ ಹಿಡಿದು ಇರಿಯಬೇಕಲ್ಲದೆ,
ಮೊನೆಯ ಹಿಡಿದು ಇರಿದವರುಂಟೆ ?
ನೆನಹ ರೂಪಿನಲ್ಲಿ ಅನುಕರಿಸಬಹುದಲ್ಲದೆ,
ರೂಪ ನೆನಹಿನಲ್ಲಿ ಅನುಕರಿಸಬಹುದೆ ?
ತಿಟ್ಟವ ಲಕ್ಷಿಸುವುದು ಲೆಕ್ಕಣಿಕೆಯಿಲ್ಲದೆ,
ಆ ತಿಟ್ಟ ಲೆಕ್ಕಣಿಕೆಯ ಲಕ್ಷಿಸಬಹುದೆ ?
ಇಂತೀ ದ್ವಂದ್ವವನರಿದು, ಉಭಯದ ಸಂದಿನ ಬೆಸುಗೆ ಒಂದೆಂದಲ್ಲಿ,
ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Vastuva kuritu iṣṭava nōḍabēkallade,
iṣṭava kuritu vastuva nōḍabahude?
Hiḍiteya hiḍidu iriyabēkallade,
moneya hiḍidu iridavaruṇṭe?
Nenaha rūpinalli anukarisabahudallade,
rūpa nenahinalli anukarisabahude?
Tiṭṭava lakṣisuvudu lekkaṇikeyillade,
ā tiṭṭa lekkaṇikeya lakṣisabahude?
Intī dvandvavanaridu, ubhayada sandina besuge ondendalli,
aikyānubhāva, niḥkaḷaṅka mallikārjunā.