•  
  •  
  •  
  •  
Index   ವಚನ - 733    Search  
 
ಸತ್ಕ್ರೀವಂತಂಗೆ ಭಕ್ತಸ್ಥಲವಿಲ್ಲ, ನಿರ್ಮಲಚಿತ್ತಂಗೆ ಮಾಹೇಶ್ವರಸ್ಥಲವಿಲ್ಲ. ಪರಿಪೂರ್ಣಭಾವಿಗೆ ಪ್ರಸಾದಿಸ್ಥಲವಿಲ್ಲ, ಉಭಯವನಳಿದವಂಗೆ ಪ್ರಾಣಲಿಂಗಿಸ್ಥಲವಿಲ್ಲ. ಶ್ರುತದೃಷ್ಟ ಅನುಮಾನಕ್ಕೆ ಒಳಗಾಗನಾಗಿ ಶರಣಸ್ಥಲವಿಲ್ಲ. ಕೂಡಿಹೆನೆಂಬ ಭಾವವಿಲ್ಲವಾಗಿ ಐಕ್ಯಸ್ಥಲವಿಲ್ಲ. ಇಂತೀ ಸ್ಥಲದಿಂದ ಸ್ಥಲವನೆಯ್ದಿ, ಸ್ಥಲಲೇಪವಾದ ಮತ್ತೆ ಮೀರಿದ ತೆರನ ನೀವೆ ಬಲ್ಲಿರಿ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Satkrīvantaṅge bhaktasthalavilla, nirmalacittaṅge māhēśvarasthalavilla. Paripūrṇabhāvige prasādisthalavilla, ubhayavanaḷidavaṅge prāṇaliṅgisthalavilla. Śrutadr̥ṣṭa anumānakke oḷagāganāgi śaraṇasthalavilla. Kūḍ'̔ihenemba bhāvavillavāgi aikyasthalavilla. Intī sthaladinda sthalavaneydi, sthalalēpavāda matte mīrida terana nīve balliri, niḥkaḷaṅka mallikārjunā. Read More