•  
  •  
  •  
  •  
Index   ವಚನ - 802    Search  
 
ಹೇಮದ ಬಣ್ಣ ರಸವು ಅಗ್ನಿಯ ಸಂಗದಿಂದ ರಸವೊಸರಿ ಸಂಗ ಪರಿಪೂರ್ಣವಾದಲ್ಲಿ, ರಸವೋ? ಬಣ್ಣವೋ? ಘಟವೋ? ಎರಕವಿಲ್ಲದೆ ಘಟ್ಟಿಯಾದಂತೆ ಅಂಗವು, ಲಕ್ಷಿಸಿಪ್ಪ ಲಿಂಗವು, ಲಕ್ಷಿಸುತಿಪ್ಪ ಚಿತ್ತವು, ಹೆಪ್ಪುಗೊಂಡಂತೆ ಈ ಗುಣ ಲಿಂಗಾಂಗಿಯ ಶುಭಸೂಚನೆ, ನಿಃಕಳಂಕ ಮಲ್ಲಿಕಾರ್ಜುನ ಲಿಂಗವನೊಡಗೂಡಿದವನಂಗ.
Transliteration Hēmada baṇṇa rasavu agniya saṅgadinda rasavosari saṅga paripūrṇavādalli, rasavō? Baṇṇavō? Ghaṭavō? Erakavillade ghaṭṭiyādante aṅgavu, lakṣisippa liṅgavu, lakṣisutippa cittavu, heppugoṇḍante ī guṇa liṅgāṅgiya śubhasūcane, niḥkaḷaṅka mallikārjuna liṅgavanoḍagūḍidavanaṅga.