•  
  •  
  •  
  •  
Index   ವಚನ - 55    Search  
 
ಮರಹೆಂಬುದಾವರಿಸಿದವರಾರಾದಡಾಗಲಿ, ದೇವ ದಾನವ ಮಾನವರೊಳಗಾದವರಾರಾದರೂ, ಮಾಡಬಾರದ ಕರ್ಮವ ಮಾಡಿ, ಬಾರದ ಭವದಲಿ ಬಂದು ಉಣ್ಣದ ಅಪೇಯವ ಉಂಡು, ಕುಡಿದು ಕಾಣದ ದುಃಖವ ಕಂಡು ಸಾಯದ ನಾಯ ಸಾವ ಸತ್ತು ಹೋಹರಿಗೆ ಕಡೆಯಿಲ್ಲ. ಶಿವ ಶಿವ ಮಹಾದೇವ, ನೀನು ಮಾಡಿದ ಬಿನ್ನಾಣದ ಮರವೆಯ ಕಂಡು ನಾನು ಬೆರಗಾದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration (Vachana in Roman Script) Marahembudāvarisidavarārādaḍāgali, dēva dānava mānavaroḷagādavarārādarū, māḍabārada karmava māḍi, bārada bhavadali bandu uṇṇada apēyava uṇḍu, kuḍidu kāṇada duḥkhava kaṇḍu sāyada nāya sāva sattu hōharige kaḍeyilla. Śiva śiva mahādēva, nīnu māḍida binnāṇada maraveya kaṇḍu nānu beragādenu kāṇā, nijaguru svatantrasid'dhaliṅgēśvara. Read More