ಪರಮೇಶ್ವರನ ಪರಮೈಶ್ವರ್ಯವೆನಿಪ, ನಿತ್ಯ ನಿಜವಾದ
ವಿಭೂತಿಯನು, ಭಕ್ತಿಯಿಂದೊಲಿದು ಧರಿಸಲು,
ನಿತ್ಯರಪ್ಪರು ನೋಡಿರೇ.
ಮುನ್ನ ಜಮದಗ್ನಿ ಕಶ್ಯಪ ಅಗಸ್ತ್ಯ ಮೊದಲಾದ ಋಷಿಗಳು,
ಸಮಸ್ತ ದೇವತೆಗಳು, ಮೂರು ಮೂರು ಬಾರಿ,
ಆಯುಷ್ಯವ ಪಡದೆರೆಂದು ವೇದಗಳು ಸಾರುತ್ತಿವೆ.
`ತ್ರಿಯಾಯುಷಂ ಜಮದಗ್ನೇ: ಕಶ್ಯಪಸ್ಯ ತ್ರಿಯಾಯುಷಂ
ಅಗಸ್ತ್ಯಸ್ಯ ತ್ರಿಯಾಯುಷಂ ಯುದ್ದೇವಾನಾಂ ತ್ರಿಯಾಯುಷಂ
ತನ್ಮೇ ಅಸ್ತು ತ್ರಿಯಾಯುಷಂ' ಎಂದುವು ಶ್ರುತಿಗಳು.
ಇದನರಿದು ಧರಿಸಿರೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆನೊಲಿಸಬಲ್ಲಡೆ.
Transliteration Paramēśvarana paramaiśvaryavenipa, nitya nijavāda
vibhūtiyanu, bhaktiyindolidu dharisalu,
nityarapparu nōḍirē.
Munna jamadagni kaśyapa agastya modalāda r̥ṣigaḷu,
samasta dēvategaḷu, mūru mūru bāri,
āyuṣyava paḍaderendu vēdagaḷu sāruttive.
`Triyāyuṣaṁ jamadagnē:Kaśyapasya triyāyuṣaṁ
agastyasya triyāyuṣaṁ yuddēvānāṁ triyāyuṣaṁ
tanmē astu triyāyuṣaṁ' enduvu śrutigaḷu.
Idanaridu dharisirē,
nijagurusvatantrasid'dhaliṅgēśvarananolisaballaḍe.