•  
  •  
  •  
  •  
Index   ವಚನ - 109    Search  
 
ನಿಚ್ಚ ಸಾವಿರ ನೋಂಪಿಯ ನೋಂತು, ಒಂದು ದಿನ ಹಾದರವನಾಡಿದರೆ, ಆ ನೋಂಪಿಯು ತನಗೆ ಫಲಿಸುವುದೇ ಅಯ್ಯ? ಹಲವು ಕಾಲ ಗುರು ಲಿಂಗ ಜಂಗಮವನರ್ಚಿಸಿ ಆರಾಧಿಸುತ್ತ, ಒಮ್ಮೆಯಾದರು ದೂಷಣೆಯ ಮಾಡಿದಡೆ, ಆ ಪೂಜಾಫಲ ತಮಗೆ ಸಿದ್ಧಿಸುವುದೆ? ಸಿದ್ಧಿಸದಾಗಿ. ಅನೇಕ ಆಯಾಸದಲ್ಲಿ ಗಳಿಸಿದ ಧನವ, ನಿಮಿಷದಲ್ಲಿ ಅರಸು ದಂಡವ ಕೊಂಡಂತಾಯಿತ್ತು ಇವರ ಭಕ್ತಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಒಲವಿಲ್ಲದ ಕಾರಣ.
Transliteration (Vachana in Roman Script) Nicca sāvira nōmpiya nōntu, ondu dina hādaravanāḍidare, ā nōmpiyu tanage phalisuvudē ayya? Halavu kāla guru liṅga jaṅgamavanarcisi ārādhisutta, om'meyādaru dūṣaṇeya māḍidaḍe, ā pūjāphala tamage sid'dhisuvude? Sid'dhisadāgi. Anēka āyāsadalli gaḷisida dhanava, nimiṣadalli arasu daṇḍava koṇḍantāyittu ivara bhakti, nijaguru svatantrasid'dhaliṅgēśvara nim'ma olavillada kāraṇa. Read More