•  
  •  
  •  
  •  
Index   ವಚನ - 136    Search  
 
ಶ್ರೀಗುರುಕರುಣ ಕಟಾಕ್ಷಮಾತ್ರದಿಂದ ಶಿವಲಿಂಗದ ಒಲುಮೆ. ಆ ಶಿವಲಿಂಗದ ಒಲುಮೆಗೆ ಗುರುಕರುಣವೇ ಮುಖ್ಯ. ಅದು ಕಾರಣ, ಗುರುಪೂಜೆಯ ಮಾಡಿ, ಗುರು ಕೃಪೆಯನೆ ಪಡೆದಿಹುದಯ್ಯ. ಉಪಮಿಸಬಾರದ ಮಹಾದೇವನು, ಪ್ರತ್ಯಕ್ಷವಾಗಿ, ಗುರುರೂಪಿಂದ ಇಹನೆಂದರಿದು, ಗುರುಭಕ್ತಿಯನೆ ಮಾಡುವುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration Śrīgurukaruṇa kaṭākṣamātradinda śivaliṅgada olume. Ā śivaliṅgada olumege gurukaruṇavē mukhya. Adu kāraṇa, gurupūjeya māḍi, guru kr̥peyane paḍedihudayya. Upamisabārada mahādēvanu, pratyakṣavāgi, gururūpinda ihanendaridu, gurubhaktiyane māḍuvudu, nijaguru svatantrasid'dhaliṅgēśvara.