ಖಂಡಿತವಿಲ್ಲದ ಅಖಂಡಿತರೂಪ ನೀನು ಕಂಡಾ ಎಲೆ ಅಯ್ಯ.
ಮಂಡಲತ್ರಯದ ಮಧ್ಯದಲ್ಲಿ ನಿಂದು ಖಂಡಿತನೆಂಬ ಹಾಂಗೆ
ತೋರುತ್ತಿದ್ದೆಯಯ್ಯ.
ನಿನ್ನ ಬೆಡಗ ನಾ ಬಲ್ಲೆ.
ಖಂಡಪತ್ರದಲ್ಲಿ ತೋರುವ ಚಂಡಕಿರಣದಂತೆ ತೋರಿದೆಯಾಗಿ,
ಎನ್ನ ಕಂಗಳ ಕೊನೆಯಲ್ಲಿ ನಿಂದು ನೋಡುವಾತ ನೀನೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration (Vachana in Roman Script)Khaṇḍitavillada akhaṇḍitarūpa nīnu kaṇḍā ele ayya.
Maṇḍalatrayada madhyadalli nindu khaṇḍitanemba hāṅge
tōruttiddeyayya.
Ninna beḍaga nā balle.
Khaṇḍapatradalli tōruva caṇḍakiraṇadante tōrideyāgi,
enna kaṅgaḷa koneyalli nindu nōḍuvāta nīnē,
nijaguru svatantrasid'dhaliṅgēśvara.
Read More