ಎಲೆಯುದುರಿದ ವೃಕ್ಷ ಉಲಿಯಬಲ್ಲುದೆ?
ಜಲವರತ ತಟಾಕ ಗೊರೆಗೊಳಬಲ್ಲುದೆ?
ಸಲೆ ಶಿವನನರಿದು ತಾ ಶಿವನೊಳು ಕೂಡಿ ಮಾಡುವ ಕ್ರೀ
ಫಲವ ಕೊಡಬಲ್ಲುದೆ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ
ಮಾಡುವ ಕ್ರೀ, ಹುರಿದ ಬೀಜದಂತೆ.
Transliteration Eleyudurida vr̥kṣa uliyaballude?
Jalavarata taṭāka goregoḷaballude?
Sale śivananaridu tā śivanoḷu kūḍi māḍuva krī
phalava koḍaballude?
Nijaguru svatantrasid'dhaliṅgēśvarana śaraṇa
māḍuva krī, hurida bījadante.