ಆದಿ ಅನಾದಿ ಎಂದು ಗಾದೆಯ
ಮಾತು ನುಡಿದಾಡುವರೆಲ್ಲ
ಇವೆರಡರ ಮಧ್ಯದಲ್ಲಿಪ್ಪ ಮಾಯಾಪ್ರಪಂಚನೆ
ಅಳೆವುತ್ತ ಸುರಿವುತಿಪ್ಪರಲ್ಲದೆ,
ಆದಿಯಿಂದಲತ್ತತ್ತಲಾರು ಬಲ್ಲರು?
ಅನಾದಿಯಿಂದತ್ತತ್ತಲಾರು ಬಲ್ಲರು?
ಇದರ ಭೇದಾದಿ ಭೇದವ ಮುನ್ನಿನ
ಆದ್ಯರು ಬಲ್ಲರಲ್ಲದೆ, ಸಾಧಕರಿಗಳವಲ್ಲ.
ವೇದಶಾಸ್ತ್ರಾಗಮ ಪುರಾತರ ವಚನ
ಬಹುಶ್ರುತಿ ಇದಿರಿಟ್ಟುಕೊಂಡು, ಕೂಗಿಯಾಡಿ,
ಗೋಡೆ ಹಾಯಿಸುವ ಜಡವಾದಿಗಳ ಮಾತ
ಮೆಚ್ಚರು ನಮ್ಮ ಶರಣರು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Transliteration Ādi anādi endu gādeya
mātu nuḍidāḍuvarella
iveraḍara madhyadallippa māyāprapan̄cane
aḷevutta surivutipparallade,
ādiyindalattattalāru ballaru?
Anādiyindattattalāru ballaru?
Idara bhēdādi bhēdava munnina
ādyaru ballarallade, sādhakarigaḷavalla.
Vēdaśāstrāgama purātara vacana
bahuśruti idiriṭṭukoṇḍu, kūgiyāḍi,
gōḍe hāyisuva jaḍavādigaḷa māta
meccaru nam'ma śaraṇaru,
basavapriya kūḍalacennabasavaṇṇā.