ನಿರಾಳಲಿಂಗವ ಕಾಂಬುದಕ್ಕೆ
ಮನ ಮತ್ತೊಂದೆಡೆಗೆ ಹರಿಯದಿರಬೇಕು;
ನೆನಹು ಲಿಂಗವಲ್ಲದೆ ಮತ್ತೊಂದ ನೆನೆಯದಿರಬೇಕು;
ತನುವಿನಲ್ಲಿ ಮರಹಿಲ್ಲದಿರಬೇಕು; ಕಾಳಿಕೆ ಹೊಗದಿರಬೇಕು.
ಇಂತು ನಿಶ್ಚಿಂತವಾಗಿ ಚಿತ್ತಾರದ ಬಾಗಿಲವ ತೆರೆದು
ಮುತ್ತು ಮಾಣಿಕ ನವರತ್ನ ತೆತ್ತಿಸಿದಂತಿಹ
ಉಪ್ಪರಿಗೆ ಮೇಗಳ ಶಿವಾಲಯವ ಕಂಡು,
ಅದರೊಳಗೆ ಮನ ಅಚ್ಚೊತ್ತಿದಂತಿದ್ದು,
ಇತ್ತ ಮರೆದು ಅತ್ತಲೆ ನೋಡಿ ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Nirāḷaliṅgava kāmbudakke
mana mattondeḍege hariyadirabēku;
nenahu liṅgavallade mattonda neneyadirabēku;
tanuvinalli marahilladirabēku; kāḷike hogadirabēku.
Intu niścintavāgi cittārada bāgilava teredu
muttu māṇika navaratna tettisidantiha
upparige mēgaḷa śivālayava kaṇḍu,
adaroḷage mana accottidantiddu,
itta maredu attale nōḍi nijamuktaḷādenayyā
appaṇṇapriya cennabasavaṇṇā.