ಪಿಂಡಾಂಡವ ನಿರ್ಮಿಸಿದ ಶಿವನು
ಆ ಪಿಂಡದೊಳು ಜ್ಞಾನವ
ಆನೆ ಕಡೆ ಇರುವೆ ಮೊದಲು
ಎಂಬತ್ತನಾಲ್ಕುಲಕ್ಷ ಜೀವರಾಶಿಯೊಳಗೆ
ಜ್ಞಾನಚೈತನ್ಯಸ್ವರೂಪವಾಗಿಯಿದ್ದನು.
ಅದಕ್ಕೆ ಸಾಕ್ಷಿ:
``ಸಕಲಜೀವ ಶಿವಚೈತನ್ಯಂ ಸಕಲ ಜಗದಾರಾಧ್ಯದೈವಂ
ಸಕಲ ದೇವರೊಂದೇ ಪಿತಾ ಪರಮೇಶ್ವರಂ ನಿತ್ಯನಿತ್ಯಃ||''
ಎಂದುದಾಗಿ, ಇದು ಕಾರಣ,
ಸಕಲರಾತ್ಮಜ್ಞಾನಜ್ಯೋತಿಯಾಗಿ ನೀನೆ ಇದ್ದೆಯಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Piṇḍāṇḍava nirmisida śivanu
ā piṇḍadoḷu jñānava
āne kaḍe iruve modalu
embattanālkulakṣa jīvarāśiyoḷage
jñānacaitan'yasvarūpavāgiyiddanu.
Adakke sākṣi:
``Sakalajīva śivacaitan'yaṁ sakala jagadārādhyadaivaṁ
sakala dēvarondē pitā paramēśvaraṁ nityanityaḥ||''
endudāgi, idu kāraṇa,
sakalarātmajñānajyōtiyāgi nīne iddeyayyā
paramaguru paḍuviḍi sid'dhamallināthaprabhuve.