•  
  •  
  •  
  •  
Index   ವಚನ - 176    Search  
 
ಹರಿಣಪಾದಮಾತ್ರದಷ್ಟು ಉಪಾಸ್ತಕೆ (?) ಹರಿ ಸುರ ಬ್ರಹ್ಮಾದಿಗಳು ನೆರೆ ಮೂರುಲೋಕವೆಲ್ಲ ಮರುಳಾಗಿ ವಿಷಯಭಂಗಿತರಾಗಿ ಭವಕೆ ಗುರಿಯಾದರಯ್ಯಾ. ಅದು ಎಂತೆಂದರೆ: ಸಾಕ್ಷಿ: ಹರಣಿಪದಮಾತ್ರೇಣ ಮೋನಸ್ಯ (?) ಜಗತ್ರಯಂ | ಸುಖ ಬಿಂದು ವಿಷಯಾಸ್ತತ ದುಃಖಪರ್ವತ ಏವ ಚ || (?)'' ಎಂದುದಾಗಿ, ಬಿಂದುಸುಖ ವಿಷಯಧಾವತಿಯ ದಂದುಗ, ಸಂಸಾರದುಃಖ ಪರ್ವತದಷ್ಟು ನೋಡ. ನಿಃಸಂಸಾರಿ ನಿರಾಭಾರಿಯಾಗಿ ನೋಡುತಿದ್ದೆಯಲ್ಲ ಜಗದಾಟವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Hariṇapādamātradaṣṭu upāstake (?) Hari sura brahmādigaḷu nere mūrulōkavella maruḷāgi viṣayabhaṅgitarāgi bhavake guriyādarayyā. Adu entendare: Sākṣi: Haraṇipadamātrēṇa mōnasya (?) Jagatrayaṁ | sukha bindu viṣayāstata duḥkhaparvata ēva ca || (?)'' Endudāgi, bindusukha viṣayadhāvatiya danduga, sansāraduḥkha parvatadaṣṭu nōḍa. Niḥsansāri nirābhāriyāgi nōḍutiddeyalla jagadāṭava paramaguru paḍuviḍi sid'dhamallināthaprabhuve.