•  
  •  
  •  
  •  
Index   ವಚನ - 175    Search  
 
ಯೋನಿಯಲ್ಲಿ ಹುಟ್ಟಿ, ಯೋನಿಯನೆ ಬಯಸಿ, ಯೋನಿಯ ಮುಖಕೆ ಗುರಿಯಾಗಿ ಸತ್ತು ಸತ್ತು ಯೋನಿಯೆಂಬ ಗಾಣದಲ್ಲಿ ಹುಟ್ಟುತ್ತಿಪ್ಪುದು 'ಶಿವ' ನಿಮ್ಮ ನೆನವ ಮರೆದ ಕಾರಣ. ಅದು ಎಂತೆಂದರೆ: ಸಾಕ್ಷಿ: ``ಇದಂ ಗರ್ಭಗತಂ ಶ್ರುತ್ವಾ ಯೋನಿಯಂತ್ರಪ್ರಪೀಡನಂ | ಜಾಯತೇ ವಾಯುನಾ ವೇತ್ತಿ ವಿಸ್ಮೃತೇ ವೈಷ್ಣವೇ ಶ್ರುತೇ ||'' ಎಂದುದಾಗಿ, ಸಂಸಾರ ವಿಷಯದ ಸರ್ಪನ ವಿಷ ತಲೆಗೇರಿ ಮುಂದುಗಾಣದೆ ಅರುಹಿರಿಯರೆಲ್ಲ ಭಂಗಬಡುತ್ತಿದ್ದರು- ನಿನ್ನನೆಂತು ಬಲ್ಲರಯ್ಯ? ಸಂಸಾರವೆಂಬುದ ಮುಂದುಗೊಂಡು ನಿನ್ನ ಮರೆದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Yōniyalli huṭṭi, yōniyane bayasi, yōniya mukhake guriyāgi sattu sattu yōniyemba gāṇadalli huṭṭuttippudu 'śiva' nim'ma nenava mareda kāraṇa. Adu entendare: Sākṣi: ``Idaṁ garbhagataṁ śrutvā yōniyantraprapīḍanaṁ | jāyatē vāyunā vētti vismr̥tē vaiṣṇavē śrutē ||'' endudāgi, sansāra viṣayada sarpana viṣa talegēri mundugāṇade aruhiriyarella bhaṅgabaḍuttiddaru- ninnanentu ballarayya? Sansāravembuda mundugoṇḍu ninna maredenayyā paramaguru paḍuviḍi sid'dhamallināthaprabhuve.