ಏನೆಂದು ಉಪಮಿಸುವೆನಯ್ಯಾ ಶ್ರೀಪಂಚಾಕ್ಷರಿಯ!
ಏನೆಂದು ಬಣ್ಣಿಸುವೆನಯ್ಯಾ ಶ್ರೀಪಂಚಾಕ್ಷರಿಯ!
ನೆನೆವಡೆನ್ನ ಮನ ಸಾಲದು, ನುಡಿವಡೆನ್ನ ಜಿಹ್ವೆ ಸಾಲದು,
ಕೇಳುವಡೆನ್ನ ಕರ್ಣ ಸಾಲದು.
ಮನಮುಟ್ಟಿ ನೆನೆದು ಶ್ರೀ ಪಂಚಾಕ್ಷರಿಯ,
ಜಿಹ್ವೆಮುಟ್ಟಿ ಸ್ತುತಿಸಿ ಶ್ರೀಪಂಚಾಕ್ಷರಿಯ,
ಕರ್ಣಮುಟ್ಟಿ ಕೇಳಿ ಶ್ರೀಪಂಚಾಕ್ಷರಿಯ
ನಾನು ಅಡಿಗಡಿಗೆ ನಿತ್ಯಮುಕ್ತನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Ēnendu upamisuvenayyā śrīpan̄cākṣariya!
Ēnendu baṇṇisuvenayyā śrīpan̄cākṣariya!
Nenevaḍenna mana sāladu, nuḍivaḍenna jihve sāladu,
kēḷuvaḍenna karṇa sāladu.
Manamuṭṭi nenedu śrī pan̄cākṣariya,
jihvemuṭṭi stutisi śrīpan̄cākṣariya,
karṇamuṭṭi kēḷi śrīpan̄cākṣariya
nānu aḍigaḍige nityamuktanāgiddenu kāṇā
paramaguru paḍuviḍi sid'dhamallināthaprabhuve