ಜೀವನೆ ಶಿವನು, ಶಿವನೆ ಜೀವನು, ಆ ಜೀವನೆ ಕೇವಲ ಶಿವನು.
ಜೀವನು ಪಾಶಬದ್ಧನಹನು ಪಾಶದಿಂದ ಮುಕ್ತನು ಸದಾಶಿವನು. ಸತ್ಪಿರುಷರ
ಜನನ ಮರಣದಿಂದ’ ಸಂಕಟವು ಹೋಹುದು.
ಈ ಸಮಸ್ತ ಜಗತ್ಪ್ರಪಂಚವು ಶಿವಾತ್ಮಕವಾಗಿರುವಂಥದ್ದು.
ಅದು ಪರಮೇಶ್ವರನ ಹೊರತಾಗಿ ಇಲ್ಲ.
ನಾನೆ ಶಿವನೆಂಬ ಬುದ್ಧಿಯು ಉತ್ತಮವಾದ ಜ್ಞಾನವಯ್ಯ ಶಾಂತವೀರೇಶ್ವರಾ
Transliteration Jīvane śivanu, śivane jīvanu, ā jīvane kēvala śivanu.
Jīvanu pāśabad'dhanahanu pāśadinda muktanu sadāśivanu. Satpiruṣara
janana maraṇadinda’ saṅkaṭavu hōhudu.
Ī samasta jagatprapan̄cavu śivātmakavāgiruvanthaddu.
Adu paramēśvarana horatāgi illa.
Nāne śivanemba bud'dhiyu uttamavāda jñānavayya śāntavīrēśvarā