ಬಳಿಕ ‘ದಾಸೆಕ್ಷಿ ಕ್ಷಯೆ’ ಎಂಬ ಎರಡು ಧಾತುಗಳಿಂದೆ
ದೀಕ್ಷಾ ಶಬ್ದಕ್ಕೆ ನಿರುಕ್ತಿಯನು ಹೇಳುತ್ತಿರುವನೆಂದಂತೆಂದೊಡೆ:
ಆವುದಾನೊಂದು ಕಾರಣವಾಗಿ
ಪರಬ್ರಹ್ಮ ಪರಶಿವ ವಾಚ್ಯವಾದ
ಮಹಾಲಿಂಗ ಜ್ಞಾನವು ಕೊಂಡಾಡುತ್ತಿರುವುದು
ಮಲ ಮಾಯಾ ಕರ್ಮಪಾಶ ಬಂಧನವು ಕೆಡತ್ತಿರ್ಪುದು
ಇದು ಕಾರಣವಾಗಿ ಜ್ಞಾನ ಕ್ರಿಯಾತ್ಮಿಕೆಯಾದ ಈ ಶಿವಭಕ್ತಿಯೆ
ದೀಕ್ಷಾ ಶಬ್ಚ ವಾಚ್ಯವೆಂದು ವೇದಗಮಜ್ಞರಾದ
ವಿದ್ವಾಂಸರು ಹೇಳುವರಯ್ಯ
ಶಾಂತವೀರೇಶ್ವರಾ
Transliteration Baḷika ‘dāsekṣi kṣaye’ emba eraḍu dhātugaḷinde
dīkṣā śabdakke niruktiyanu hēḷuttiruvanendantendoḍe:
Āvudānondu kāraṇavāgi
parabrahma paraśiva vācyavāda
mahāliṅga jñānavu koṇḍāḍuttiruvudu
mala māyā karmapāśa bandhanavu keḍattirpudu
idu kāraṇavāgi jñāna kriyātmikeyāda ī śivabhaktiye
dīkṣā śabca vācyavendu vēdagamajñarāda
vidvānsaru hēḷuvarayya
śāntavīrēśvarā