ಬಳಿಕ ಕಾರಣಂಗಳನು
ಅನ್ವರ್ಥನಾಮವ ಮಾಡಿ ಪೇಳುತ್ತಿರ್ದಪನು,
ಅಣಿಮಾದೈಶ್ವರ್ಯಕ್ಕೆ ‘ವಿಭೂತಿ’ಯು ಕಾರಣ,
ಶಿವತತ್ತ್ವವನು ಪ್ರಕಾಶಿಸಲು ‘ಭಸಿತ’ ಕಾರಣ,
ಮನೋವಾಕ್ಕಾಯ ಜನ್ಯವಾದ ಪಾತಕಗಳ
ನಾಶಕ್ಕೆ ‘ಭಸ್ಮ’ ಕಾರಣ, ತಾಪತ್ರಯದಿಂದಾದ
ವಿಪತ್ತುಗಳ ನಾಶಕ್ಕೆ[ಕಾರಣ] ‘ಕ್ಷಾರ’,
ಸಮಸ್ತ ಪ್ರಾಣಿಗಳ ರಕ್ಷೆಗೆ ಕಾರಣ ‘ರಕ್ಷೆ’ ಎಂದು
ಹೇಳುವರಯ್ಯ ಶಾಂತವೀರೇಶ್ವರಾ
Transliteration Baḷika kāraṇaṅgaḷanu
anvarthanāmava māḍi pēḷuttirdapanu,
aṇimādaiśvaryakke ‘vibhūti’yu kāraṇa,
śivatattvavanu prakāśisalu ‘bhasita’ kāraṇa,
manōvākkāya jan'yavāda pātakagaḷa
nāśakke ‘bhasma’ kāraṇa, tāpatrayadindāda
vipattugaḷa nāśakke[kāraṇa] ‘kṣāra’,
samasta prāṇigaḷa rakṣege kāraṇa ‘rakṣe’ endu
hēḷuvarayya śāntavīrēśvarā