ಆ ಸದಾಶಿವನ ಸದ್ಯೋಜಾತಮುಖದಿಂದ ಪೃಥ್ವಿ ಹುಟ್ಟಿತ್ತು.
ಆ ಪೃಥ್ವಿಯಿಂದ ನಿವೃತ್ತಿ ಕಲೆ ಪುಟ್ಟಿತ್ತು.
ಆ ಕಲೆಯಿಂದ ಕಪಿಲವರ್ಣದ ನಂದೆ ಎಂಬ ಧೇನು ಹುಟ್ಟಿತ್ತು.
ವಾಮದೇವಮುಖದಿಂದ ಉದಕಂ ಪುಟ್ಟಿತ್ತು.
ಆ ಉದಕದಿಂದ ಪ್ರತಿಷ್ಠೆ ಎಂಬ ಕಲೆ ಪುಟ್ಟಿತ್ತು.
ಆ ಕಲೆಯಿಂದ ಕೃಷ್ಣ ವರ್ಣದ ಭದ್ರೆ ಎಂಬ ಧೇನು ಹುಟ್ಟಿತ್ತು.
ಆ ಧೇನುವಿನ ಗೋಮಯದಿಂದ ‘ಭಸಿತ’ ಹುಟ್ಟಿತ್ತು.
ಅಘೋರ ಮುಖ್ಯದಿಂದ ಅಗ್ನಿ ಪುಟ್ಟಿತ್ತು.
ಆ ಕಲೆಯಿಂದ ರಕ್ತ ವರ್ಣದ ಸುರಭಿ ಹುಟ್ಟಿತ್ತು.
ಆ ಧೇನುವಿನ ಗೋಮಯದಿಂದ ‘ಭಸ್ಮ’ ಹುಟ್ಟಿತ್ತು.
ಆ ಶಿವನ ತತ್ಪುರುಷಮುಖದಿಂದ ವಾಯು ಪುಟ್ಟಿತ್ತು.
ಅದರಿಂದ ಶಾಂತಿಕಳೆ ಪುಟ್ಟಿತ್ತು.
ಆ ಕಲೆಯಿಂದ ಧವಳ ವರ್ಣದ ಸುಶೀಲೆ ಎಂಬ ಧೇನು ಪುಟ್ಟಿತ್ತು.
ಆ ಧೇನುವಿನ ಗೊಮಯದಿಂದ ‘ಕ್ಷಾರ’ ಪುಟ್ಟಿತ್ತು.
ಈಶಾನಮುಖದಿಂದ ಆಕಾಶ ಪುಟ್ಟಿತ್ತು.
ಅದರಿಂದ ಶಾಂತ್ಯಾತೀತ ಕಲೆ ಪುಟ್ಟಿತ್ತು.
ಆ ಕಲೆಯಿಂದ ಚಿತ್ತ ವರ್ಣದ ಸುಮನೆ ಎಂಬ ಧೇನು ಪುಟ್ಟಿತ್ತು.
ಆ ಧೇನುವಿನ ಗೋಮಯದಿಂದ ‘ರಕ್ಷೆ’ ಪುಟ್ಟಿತ್ತಯ್ಯ
ಶಾಂತವೀರೇಶ್ವರಾ
Transliteration Ā sadāśivana sadyōjātamukhadinda pr̥thvi huṭṭittu.
Ā pr̥thviyinda nivr̥tti kale puṭṭittu.
Ā kaleyinda kapilavarṇada nande emba dhēnu huṭṭittu.
Vāmadēvamukhadinda udakaṁ puṭṭittu.
Ā udakadinda pratiṣṭhe emba kale puṭṭittu.
Ā kaleyinda kr̥ṣṇa varṇada bhadre emba dhēnu huṭṭittu.
Ā dhēnuvina gōmayadinda ‘bhasita’ huṭṭittu.
Aghōra mukhyadinda agni puṭṭittu.
Ā kaleyinda rakta varṇada surabhi huṭṭittu.
Ā dhēnuvina gōmayadinda ‘bhasma’ huṭṭittu.
Ā śivana tatpuruṣamukhadinda vāyu puṭṭittu.
Adarinda śāntikaḷe puṭṭittu.
Ā kaleyinda dhavaḷa varṇada suśīle emba dhēnu puṭṭittu.
Ā dhēnuvina gomayadinda ‘kṣāra’ puṭṭittu.
Īśānamukhadinda ākāśa puṭṭittu.
Adarinda śāntyātīta kale puṭṭittu.
Ā kaleyinda citta varṇada sumane emba dhēnu puṭṭittu.
Ā dhēnuvina gōmayadinda ‘rakṣe’ puṭṭittayya
śāntavīrēśvarā