ಮತ್ತೆ, ಬ್ರಹ್ಮ ಮೊದಲಾದ ದೇವತೆಗಳು,
ನಾರದ ಮೊದಲಾದ ಮುನಿಗಳು
ಸನಕ ಮೊದಲಾದ ಯೋಗಿಶ್ವರರು,
ಬಾಣ ಮೊದಲಾದ ದಾನವರು ಸಮಸ್ತರು
ಶಿವಭಕ್ತತತ್ವರರು ಭಸ್ಮಸ್ನಾನದಿಂದ ದೋಷಮುಕ್ತರು,
ನಿತ್ಯಶುದ್ಧರು ಎಂದು ಪ್ರಸಿದ್ಧವಯ್ಯ
ಶಾಂತವೀರೇಶ್ವರಾ
Transliteration Matte, brahma modalāda dēvategaḷu,
nārada modalāda munigaḷu
sanaka modalāda yōgiśvararu,
bāṇa modalāda dānavaru samastaru
śivabhaktatatvararu bhasmasnānadinda dōṣamuktaru,
nityaśud'dharu endu prasid'dhavayya
śāntavīrēśvarā