ಪೂರ್ವದಲ್ಲಿ ಉಪಮನ್ಯ ಮುನೀಶ್ವರನು
ಪಿಶಾಚಿಗಳಿಂದ ಹಿಂಸೆಗೆ ಒಳಗಾಗಿಯೂ
ಬ್ರಹ್ಮ ಪ್ರಕಾಶವುಳ್ಳವನಾಗಿ
ಶಿವಸ್ಮರಣೆಯನು ಮಾಡಿ ಚಲಿಸದೆ ಇದ್ದನು.
ಆ ಮೇಲೆ ಗಂಭೀರವಾದ ಧ್ವನಿಯಿಂದ
‘ನಮಃ ಶಿವಾಯ’ ಎಂದು ನುಡಿದನು;
ಹಿಂದೆ ಹಿಂಸಿಸಿದ ಪಿಶಾಚಿಗಳು
ಉಪಮನ್ಯು ಮಹಾಮುನೀಶ್ವರರು
ಕಾರಣವಾಗಿ ಪಂಚಾಕ್ಷರಿ ಮಂತ್ರವನ್ನು
ಕೇಳಿ ಆ ಕ್ಷಣವೆ ಪಿಶಾಚ ದೇಹವನು
ಬಿಟ್ಟು ಮನುಷ್ಯ ದೇಹವಂ ತಾಳಿ
ಶಿರಸ್ಸಿನಿಂದ ಮಹಾತೇಜಃಪ್ರಭಾವವುಳ್ಳ
ಉಪಮನ್ಯು ಮುನೀಶ್ವರರ ಸಮೀಪಿಸಿ
‘ಎಲೆ ಮಹಾಮುನಿಯೆ ನಮ್ಮನು ರಕ್ಷಿಸು’
ಎಂದು ನುಡಿದ ನಮಸ್ಕಾರವ ಮಾಡಿದರಯ್ಯ
ಶಾಂತವೀರೇಶ್ವರಾ
Transliteration Pūrvadalli upaman'ya munīśvaranu
piśācigaḷinda hinsege oḷagāgiyū
brahma prakāśavuḷḷavanāgi
śivasmaraṇeyanu māḍi calisade iddanu.
Ā mēle gambhīravāda dhvaniyinda
‘namaḥ śivāya’ endu nuḍidanu;
hinde hinsisida piśācigaḷu
upaman'yu mahāmunīśvararu
kāraṇavāgi pan̄cākṣari mantravannu
kēḷi ā kṣaṇave piśāca dēhavanu
biṭṭu manuṣya dēhavaṁ tāḷi
śiras'sininda mahātējaḥprabhāvavuḷḷa
upaman'yu munīśvarara samīpisi
‘ele mahāmuniye nam'manu rakṣisu’
endu nuḍida namaskārava māḍidarayya
śāntavīrēśvarā