ಏಳುವುದು, ಇದಿರಾಗಿ ನಡೆವುದು,
‘ಚೆನ್ನಾಗಿದ್ದೀರೆ’ ಎಂಬ ಪ್ರೀತಿ ವಾಕ್ಯವ ನುಡಿದು
ಆಸನವ ಕೊಡುವುದು, ಅನ್ನವನಿಕ್ಕುವುದು,
ಉದಕವ ಕೊಡುವುದು
ಈ ಏಳು ಭಕ್ತಂಗೆ ಮುಕ್ತಿ ಸೋಪಾನವಯ್ಯ
ಶಾಂತವೀರೇಶ್ವರಾ
Transliteration Ēḷuvudu, idirāgi naḍevudu,
‘cennāgiddīre’ emba prīti vākyava nuḍidu
āsanava koḍuvudu, annavanikkuvudu,
udakava koḍuvudu
ī ēḷu bhaktaṅge mukti sōpānavayya
śāntavīrēśvarā