ದೀಕ್ಷಾತ್ರಯದಿಂದೆ ಆಣವ ಮಾಯಾ ಕಾರ್ಮಿಕವೆಂಬ
ಮಲತ್ರಯ ಸಂಬಂಧವಾದ
ಅಜ್ಞಾನವ ನಷ್ಟವ ಮಾಡುವುದಕ್ಕೆ ‘ಗುರು’ವಾದನಯ್ಯ ಶಿವನು.
ಮನದ ಸಂಕಲ್ಪ ವಿಕಲ್ವವ ಕೆಡಿಸಲು ‘ಲಿಂಗ’ವಾದನಯ್ಯ
ತನುತ್ರಯಂಗಳ ವರ್ತನೆಯ ನಷ್ಟವ
ಮಾಡುವುದಕ್ಕೆ ‘ಪ್ರಸಾದ’ವಾದನಯ್ಯ
ಸಮ್ಯ[ಕ್]ಜ್ಞಾನದಿಂದ ಮುಖ್ಯವಾದ ‘ಜಂಗಮ’ವಾದನಯ್ಯ
ಶಾಂತವೀರೇಶ್ವರಾ
Transliteration Dīkṣātrayadinde āṇava māyā kārmikavemba
malatraya sambandhavāda
ajñānava naṣṭava māḍuvudakke ‘guru’vādanayya śivanu.
Manada saṅkalpa vikalvava keḍisalu ‘liṅga’vādanayya
tanutrayaṅgaḷa vartaneya naṣṭava
māḍuvudakke ‘prasāda’vādanayya
samya[k]jñānadinda mukhyavāda ‘jaṅgama’vādanayya
śāntavīrēśvarā