ನಿರ್ವಂಚಕರ ಬೇಡಿದರೆ ಈವರಲ್ಲದೆ
ವಂಚಕಭಕ್ತರೇನ ನೀಡುವರಯ್ಯ.
ಸಿಂಧು ಬಲ್ಲಾಳ ನಿರ್ವಂಚನೆಯಿಂದ ತನ್ನ ವಧುವನಿತ್ತ
ಸಿರಿಯಾಳ ತನ್ನ ಮಗನನಿತ್ತ,
ದಾಸಯ್ಯ ತನ್ನ ವಸ್ತ್ರವನಿತ್ತನಯ್ಯ ಶಾಂತವೀರೇಶ್ವರಾ
Transliteration Nirvan̄cakara bēḍidare īvarallade
van̄cakabhaktarēna nīḍuvarayya.
Sindhu ballāḷa nirvan̄caneyinda tanna vadhuvanitta
siriyāḷa tanna magananitta,
dāsayya tanna vastravanittanayya śāntavīrēśvarā