ಶಿವಭಕ್ತನೆ ಶಿವನು, ಶಿವಭಕ್ತನ ಮಂದಿರವೆ ಶಿವಾಲಯವು,
ಶಿವಭಕ್ತನಂಗಣವೆ ವಾರಣಾಸಿ ಎಂದರಿದು
ಪುಣ್ಯ ತೀರ್ಥ ಪುಣ್ಯಕ್ಷೇತ್ರಂಗಳಿಗೆಯ್ದದೆ ಭಕ್ತಮಂದಿರವನೆಯ್ದಲು
ಇಷ್ಟಾರ್ಥಸಿದ್ಧಿ ತಪ್ಪದಯ್ಯ
ಶಾಂತವೀರೇಶ್ವರಾ
Transliteration Śivabhaktane śivanu, śivabhaktana mandirave śivālayavu,
śivabhaktanaṅgaṇave vāraṇāsi endaridu
puṇya tīrtha puṇyakṣētraṅgaḷigeydade bhaktamandiravaneydalu
iṣṭārthasid'dhi tappadayya
śāntavīrēśvarā